ಪೆರ್ಡೂರಿನಲ್ಲಿ ಮೇಳವಿಸಿದ ಮದುಮಕ್ಕಳ ದಂಡು perdoor news bys hekar ajekar














ಪೆರ್ಡೂರಿನಲ್ಲಿ ಮೇಳವಿಸಿದ ಮದುಮಕ್ಕಳ ದಂಡು
ಸಿಂಹ ಸಂಕ್ರಮಣಕ್ಕೆ ಸಂಭ್ರಮಿಸಿದ ಅನಂತ ಪದ್ಮನಾಭನ ಭಕ್ತರು
ಸಿಂಹ ಸಂಕ್ರಮಣದದ ದಿನವಾದ ಶನಿವಾರ ಪೆರ್ಡೂರಿನಲ್ಲಿ ಮುಂಜಾವಿನ ನಾಲ್ಕರಿಂದ ಭಕ್ತರ ಸರತಿ ಸಾಲು. ಮುಂಜಾನೆ ಐದು ಐದೂವರೆ ಗಂಟೆಗೆ ಮೊದಲ ಪೂಜೆ ನಡೆಯುವುದು ಇಲ್ಲಿನ ವಾಡಿಕೆಯಾಗಿದೆ. ಪೆರ್ಡೂರಿನ ಸುತ್ತಮುತ್ತಲಿನ ಊರುಗಳು, ತಾಲೂಕುಗಳು ಮತ್ತು ಜಿಲ್ಲೆಗಳ ಭಕ್ತರು ತಮ್ಮ ಕುಟುಂಬದ ಯಾರಿಗೆ ಮದುವೆಯಾದರೂ ನವ ದಂಪತಿಗಳನ್ನು ಈ ಸಂಕ್ರಮಣಕ್ಕೆ ಕರೆತರುವುದು ಅಥವಾ ಕಳುಹಿಸುವುದು
ಸಂಪ್ರದಾಯವಾಗಿರುವುದರಿಂದ ಇಲ್ಲಿ ಈ ದಿನ ಸಾವಿರಾರು ಹೊಸ ಜೋಡಿಗಳು ಸಡಗರ ಸಂಭ್ರಮದಿಂದ ಆಗಮಿಸುತ್ತಾರೆ.
ಮದುಮಕ್ಕಳೇ ಅಧಿಕ ಸಂಖ್ಯೆಂiiಲ್ಲಿ ಜೊತೆಯಾಗಿ ಆಗಮಿಸಿ ಪೂಜೆ ಸಲ್ಲಿಸುವುದು ಈ ಭಾಗದಲ್ಲಿ ವಿಶೇಷವಾಗಿದ್ದು ಈ ಹಬ್ಬಕ್ಕೆ ಮದುಮಕ್ಕಳ ಜಾತ್ರೆ ಎಂಬ ಹೆಸರು ಬಂದಿದೆ.
ನಾವು ಮದುವೆಯಾದ ಮೊದಲ ಸಂಕ್ರಮಣಕ್ಕೆ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ದಂಪತಿಗಳು ಕುಟುಂಬಿಕರೊಂದಿಗೆ ಪೂಜೆಗೆ ಹೋಗಿದ್ದೆವು. ಆದರೆ ಸಿಂಹ ಸಂಕ್ರಮಣಕ್ಕೆ ಆ ವರ್ಷ ಮದುವೆಯಾದ ದಂಪತಿಗಳು ಹೋಗಿ ಅನಂತ ಪದ್ಮನಾಭ ದೇವರ ಆಶೀರ್ವಾದ ಪಡೆಯ ಬೇಕೆಂಬ ಒಂದು ಕ್ರಮ ನಡೆದು ಬಂದಿರುವುದರಿಂದ ನಾವು ಇಂದು ಬಂದು ಪೂಜೆ ಸಲ್ಲಿಸಿದ್ದೇವೆ ಎಂದು ನೆಲ್ಲಿಕಟ್ಟೆಯ ಸಂತೋಷ್- ಸೌಭಾಗ್ಯ ದಂಪತಿಗಳು ಪತ್ರಿಕೆಯೊಂದಿಗೆ ಅಭಿಪ್ರಾಯ ಪಟ್ಟರು.
ನಾವು ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗಲಿ ನಮಗೆ ನಮ್ಮ ಊರಿಗೆ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಮದುಮಕ್ಕಳ ಸಂಭ್ರಮದ ಈ ದಿನ ಇಲ್ಲಿ ಬಂದು ಪೂಜೆ ನೆರವೇರಿಸಿದೆವು ಎಂದು ಹೆಬ್ರಿಯ ಲಕ್ಷ್ಮಿ - ನಾರಾಯಣ ದಂಪತಿಗಳು ತಿಳಿಸಿದರು.
ಯಾವಾಗಲೂ ಅವಕೃಪೆ ತೋರುವ ಮಳೆರಾಯ ಈ ಬಾರಿ ಬೆಳಗ್ಗನಿಂದ ಮಧ್ಯಾಹ್ನದವರೆಗೂ ಅನುಕೂಲ ಮಾಡಿಕೊಟ್ಟದ್ದು ಭಕ್ತಾದಿಗಳ ಸಂತೋಷವನ್ನು ಹೆಚ್ಚಿಸಿತ್ತು.
ಬೆಳಗ್ಗೆ ಬೇಗ ಇದ್ದ ಬಾರಿ ಜನ ಜಂಗುಳಿ ೯-೧೦ ಗಂಟೆ ಹೊತ್ತಿಗೆ ಕಡಿಮೆ ಅನಿಸುವಾಗಲೇ ಮತ್ತೆ ಭಕ್ತರ ದಂಡು ಹರಿದು ಬಂದು ಬಾರಿ ಉದ್ದದ ಸಾಲುಗಳಲ್ಲಿ ದರ್ಶನಕ್ಕೆ ಸಾಗುತ್ತಿದ್ದರು.
ವರ್ಷದಂತೆ ಈ ಬಾರಿಯೂ ೧೧.೩೦ ಗಂಟೆಯಿಂದಲೇ ಅನ್ನದಾನ ಕಾರ್ಯಕ್ರಮ ದೇವಾಲಯದ ಸಭಾಂಗಣದಲ್ಲಿ ನಡೆದು ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ಸಾವಿರ ಬಾಳೆಹಣ್ಣಿನ ಹರಕೆ
ಸಹಸ್ರ ಕದಳಿ ಫಲ ಸಮರ್ಪಣೆಯ ಹರಕೆ ಇಲ್ಲಿನ ಪ್ರಮುಖ ಹರಕೆಗಳಲ್ಲಿ ಪ್ರಮುಖವಾಗಿದ್ದು ನೂರಾರು ಜನ ಆ ಹರಕೆ ನೀಡುವವರು ಅಲ್ಲಿ ಕಂಡು ಬರುತ್ತಿದ್ದು ತಾವು ಅರ್ಪಿಸಿದ ಹಣ್ಣಗಳನ್ನು ಬಂಧು ಮಿತ್ರರಿಗೆ ಮತ್ತು ಭಕ್ತಾಧಿಗಳಿಗೆ ಪ್ರಸಾದವಾಗಿ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅಕ್ಕಿ ಹರಕೆ ಇಲ್ಲಿನ ಇನ್ನೊಂದು ಹರಕೆಯಾಗಿದ್ದು ದೇವಾಲಯದ ಮುಂಭಾಗದಲ್ಲಿ ಅದನ್ನು ಸಲ್ಲಿಸುತ್ತಿದ್ದರು.
" ಬೆಳೆ ಚೆನ್ನಾಗಿ ಆಗಲಿ, ಆರೋಗ್ಯ ಸಮಸ್ಯೆ ಪರಿಹಾರವಾಗಲಿ, ಐಶ್ವರ್ಯ ವೃದ್ಧಿಯಾಗಲಿ ಎಂಬ ಕಾರಣಗಳಿಗಾಗಿ ಈ ಅಕ್ಕಿ ಹರಕೆ ಸಲ್ಲಿಸುತ್ತಾರೆ. ಈ ಭೂಮಿ ನಾಗದೇವರ ಆಧೀನವಾಗಿದ್ದು ಅವರ ಭೂಮಿಯಲ್ಲಿ ಮಾಡಿದ ಕೃಷಿಯ ಫಲ ಕಾಣಿಕೆ ಅನಂತ ಪದ್ಮನಾಭದೇವರ ಚರಣಾರವಿಂದಗಳಿಗೆ ಸಮರ್ಪಣೆ ಆಗಲಿ ಎಂಬ ದೃಷ್ಟಿಯಿಂದ ಸಮರ್ಪಿಸುತ್ತಾರೆ ಎಂದು ಈ ಹರಕೆಯ ಕುರಿತು ಹಿರಿಯರಾದ ಕೃಷ್ಣ ಅಡಿಗ ತಿಳಿಸಿದ್ದಾರೆ.
ಇಲ್ಲಿ ಬೆಳಗ್ಗಿನ ಪೂಜೆಗೆ ಸಂಕ್ರಾಂತಿ ಬೇಕಾಗಿರುವುದರಿಂದ ಈ ಬಾರಿ ಆ.೧೭ ರಂದು ಸಂಕ್ರಾಂತಿ ಬಂದಿದೆ. ಸಾಮಾನ್ಯವಾಗಿ ಸಂಕ್ರಾಂತಿ ಶುಕ್ರವಾರ ಆಚರಿಸಲಾಗುತ್ತಿದ್ದರಿಂದ ನೂರಾರು ಭಕ್ತರು ನಿನ್ನೆಯೂ ಆಗಮಿಸಿ ತಮ್ಮ ಹರಕೆ ಸಲ್ಲಿಸದರು.
ದೇವಾಲಯದ ಸಿಬ್ಬಂಧಿಗಳು, ಹೆಚ್ಚುವರಿ ಸ್ವಯಂ ಸೇವಕರ ಸಹಕಾರದಿಂದ ಭಕ್ತರಿಗೆ ಬೇಕಾದ ಸೇವೆಯನ್ನು ಒದಗಿಸುತ್ತಿದ್ದರು.
ಆರೋಗ್ಯ ಇಲಾಖೆಯ ಸೇವೆ
ಆರೋಗ್ಯ ಇಲಾಖೆಯ ನೌಕರರು ದೇವಾಲಯಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆಯನ್ನು ಏರ್ಪಡಿಸಿದ್ದು ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಮಾಹಿತಿ ನೀಡುತ್ತಿದ್ದರು.
ಅವರ ಈ ಸೇವೆ ಪ್ರಶಂಸೆಗೆ ಪಾತ್ರವಾಯಿತು. ದೇಶದ ಪ್ರಮುಖ ಚಾನೆಲ್‌ಗಳ ಪ್ರತಿನಿಧಿಗಳು ಈ ಒಂದು ಘಟನೆಯನ್ನು ಸೆರೆಹಿಡಿಯಲು ಸೇರಿದ್ದರು.

Twitter Facebook Delicious Digg Favorites More

 
Twitter Facebook Delicious Digg Favorites More